ಡಾ. ಸಿ. ಸೋಮಶೇಖರ ಐಎಎಸ್(ನಿ)
ಸಂಸ್ಥಾಪಕರು ಹಾಗೂ ಅಧ್ಯಕ್ಷರು
ಬಸವ ವೇದಿಕೆ, ಬೆಂಗಳೂರು
ವಿಜಯ ಕರ್ನಾಟಕ ಕನ್ನಡ ಪತ್ರಿಕೆ
ಕರ್ನಾಟಕದ ಹಿರಿಯ ಐಎಎಸ್ ಅಧಿಕಾರಿ, ಸಾಹಿತಿ ಹಾಗೂ ಅಪ್ಪಟ ಕನ್ನಡಾಭಿಮಾನಿ ಡಾ. ಸಿ. ಸೋಮಶೇಖರ ಅವರ ಅಭಿಮಾನಿಗಳೆಲ್ಲರು ಕೂಡಿ ಒಂದು ಅಭಿನಂದನಾ ಸಮಾರಂಭವನ್ನು ದಿನಾಂಕ 1-12-2013 ರಂದು ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ಏರ್ಪಡಿಸಿದ್ದೇವೆ. ಈ ಸಂದರ್ಭದಲ್ಲಿ ಸೋಮಶೇಖರ್ ಅವರಿಗೆ “ಮುತ್ತಿನಹಾರ ಎಂಬ ಅಭಿನಂದನಾ ಗ್ರ್ರಂಥ ಸಮರ್ಪಣೆಯಾಗುತ್ತಿದೆ. ಆಡಳಿತಾಧಿಕಾರಿಯಾಗಿ, ಸೇವಾಕೈಂಕರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡ ಶ್ರೀಯುತರು ಸಾಹಿತ್ಯಸರಸ್ವತಿಯ ಸೇವೆಯನ್ನೂ ಹೃತ್ಪೂರ್ವಕವಾಗಿ ನಡೆಸಿಕೊಂಡು ಬರುತ್ತಿದ್ದಾರೆ. ಇಂಥ ಸಹೃದಯಿ, ಕಾಯಕಯೋಗಿ ಕುರಿತಂತೆ ನಾಡಿನ ಹೆಸರಾಂತ ಬರಹಗಾರರಾದ ಶ್ರೀ ಕರಿಗೌಡ ಬೀಚನಹಳ್ಳಿ ಅವರು ತಮ್ಮ ಮನದಾಳದ ಮಾತುಗಳನ್ನು ಲೇಖನವನ್ನಾಗಿ ಕೊಟ್ಟಿರುತ್ತಾರೆ. ಅಲ್ಲದೆ ಡಾ. ಸಿ. ಸೋಮಶೇಖರ್ ಕುರಿತಾದ ಈ ಲೇಖನವು ತಮ್ಮ ನೆಚ್ಚಿನ ದಿನಪತ್ರಿಕೆಯಲ್ಲಿ ಪ್ರಕಟವಾಗಲೆಂದು ಆಶಿಸಿರುತ್ತಾರೆ. ದಯಮಾಡಿ ಈ ಲೇಖನವನ್ನು ತಮ್ಮ ದಿನಪತ್ರಿಕೆಯಲ್ಲಿ ಪ್ರಕಟಿಸಬೇಕೆಂದು ಕೋರುತ್ತಿದ್ದೇವೆ.
ವಂದನೆಗಳೊಂದಿಗೆ -
ತಮ್ಮ ವಿಶ್ವಾಸಿ
ಕಾರ್ಯದರ್ಶಿಗಳು ಸೋಮಶೇಖರ್ ಅಭಿನಂದನಾ ಸಮಿತಿ