ಉದಯಶಂಕರ್ ಪ್ರಶಸ್ತಿ
ಸ್ಥಾಪನೆ: 2000
Preamble
ಕನ್ನಡ ಚಲನಚಿತ್ರರಂಗದ ಹಿರಿಯ ಚಿತ್ರಸಾಹಿತ್ಯದ ಬಹುದೊಡ್ಡ ಸಾಧಕರಾದ ಚಿ. ಉದಯಶಂಕರ್ ಅವರ ನೆನಪಿನಲ್ಲಿ ಕನ್ನಡಚಿತ್ರರಂಗದ ವಿವಿಧ ಪ್ರಾಕಾರಗಳಲ್ಲಿ ಮಹತ್ತರ ಸೇವೆ ಸಲ್ಲಿಸಿದ ಮಹನೀಯರುಗಳಿಗೆ ಚಿ. ಉದಯಶಂಕರವರ ಹೆಸರಿನಲ್ಲಿ ಪ್ರಶಸ್ತಿಗಳನ್ನು ನೀಡುವ ಉದ್ದೇಶದಿಂದ ಚಿ. ಉದಯಶಂಕರ್ ಪ್ರಶಸ್ತಿ ಪ್ರತಿಷ್ಟಾನವನ್ನು ಪ್ರಾರಂಭಿಸಲಾಯಿತು. 2000 ನೇ ಇಸವಿಯಲ್ಲಿ ವರನಟರಾದ ಡಾ. ರಾಜ್ ಕುಮಾರವರ ಶುಭಹಾರೈಕೆಯೊಂದಿಗೆ ಆರಂಭವಾದ ಈ ಸಂಸ್ಥೆಗೆ ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರವರು ಪೋಷಕರಾಗಿರುತ್ತಾರೆ. ಹಿರಿಯನಟಿಯರಾದ ಶ್ರೀಮತಿ ಜಯಂತಿ, ಶ್ರೀಮತಿ ಜಯಮಾಲ, ಹಿರಿಯ ನಿರ್ಮಾಪಕರಾದ ಶ್ರೀ ಚಿನ್ನೇಗೌಡ, ಕೆ. ಸಿ. ಎನ್. ಚಂದ್ರು, ಹಿರಿಯ ನಿರ್ದೇಶಕರಾದ ಶ್ರೀ ಕೆ. ಎಸ್. ಎಲ್. ಸ್ವಾಮಿ ಅವರನ್ನೊಳಗೊಂಡ ಈ ಸಮಿತಿ ಯಲ್ಲಿ ನಾನು ಕಾರ್ಯಾಧ್ಯಕ್ಷನಾಗಿ ಕಾರ್ಯಾನಿರ್ವಹಿಸುತ್ತಿದ್ದೆನೆ.
ಈ ಪ್ರಶಸ್ತಿಯನ್ನು ಇದುವರೆವಿಗೂ ಶ್ರೀ ಕರೀಂಖಾನ್, ಶ್ರೀ ಎಸ್. ಪಿ. ಬಾಲಸುಬ್ರಮಣ್ಯಮ್, ಶ್ರೀ ಪಿ. ಬಿ. ಶ್ರೀನಿವಾಸ್, ಶ್ರೀಮತಿ ಎಸ್. ಜಾನಕಿ, ಶ್ರೀ ಜೆಸುದಾಸ್, ಶ್ರೀಮತಿ ವಾಣಿಜಯರಾಮ್, ಶ್ರೀ ಅರ್. ಎನ್. ಜಯಗೋಪಾಲ್, ಶ್ರೀ ಗೀತಪ್ರಿಯ, ಪ್ರಖ್ಯಾತ ನಿರ್ಮಪಕರಾದ ಶ್ರೀಮತಿ ಪಾರ್ವತಮ್ಮ ರಾಜ್ ಕುಮಾರ್, ಶ್ರೀ ಕೆ. ಸಿ. ಎನ್. ಗೌಡ, ನಿರ್ದೇಶಕರಾದ ಶ್ರೀ ಸಿದ್ದ ಲಿಂಗಯ್ಯ, ಕೆ. ಎಸ್. ಎಲ್. ಸ್ವಾಮಿ, ಮುಂತಾದ ಚಿತ್ರರಂಗದ ಹಿರಿಯ ಸಾಧಕರುಗಳಿಗೆ ಚಿ. ಉದಯಶಂಕರ್ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಕನ್ನಡ ಚಲನಚಿತ್ರರಂಗಕ್ಕೆ ಅತ್ಯಂತ ಜನಪ್ರಿಯವಾದ ಮೇರು ಸಂಗೀತ ಸಾಹಿತ್ಯವನ್ನು ಒದಗಿಸಿದ ಶ್ರೇಷ್ಠ್ ಚಿತ್ರಸಾಹಿತಿ ಶ್ರೀ ಚಿ. ಉದಯಶಂಕರ್ ಅವರಿಗೆ ನಾಡಿನ ಪರವಾಗಿ ಕೃತಜ್ಞತೆಸಲ್ಲಿಸುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ಪ್ರಾರಂಭಿಸಲಾಗಿದೆ